Tuesday, October 21, 2014

ನನ್ನ ಬಾಲ್ಯದ ದೀಪಾವಳಿ

ಹಂಡೆ ತೊಳ್ದು, ರಂಗೋಲಿ ಹಾಕಿ
ಹಿಂಡ್ಲೆಬೀಳು ಸುತ್ತಿ, ನೀರು ತುಂಬಿ
ಬೇಗ ಎದ್ದು ನೀರು ಕಾಯಿಸಿ
ಎಣ್ಣೆ ಹಚ್ಚ್ಕೊಂಡು ಸ್ನಾನ ಮಾಡಿ
ಅಮ್ಮ ಮಾಡಿದ್ ಚೀನಿಕಾಯಿ ಕಡಬು
ತುಪ್ಪ ಹಾಕೊಂಡು ತಿಂದರೆ
ನರಕ ಚತುರ್ದಶಿ ಮುಗಿತು

ಅಮಾವಾಸ್ಯೆ ದಿನ ಪೇಟೆಗೆ ಹೋಗಿ
ಅಪ್ಪ ಕೊಟ್ಟ ಇಪ್ಪತ್ರುಪಾಯಿ
ಪಟಾಕಿ ತಂದು ಚಪ್ಪರದಲ್ಲಿ ಹರಗಿ
ಲೆಕ್ಕ ಹಾಕ್ತ ಜೊತೇಲಿ ಒಣಗಿ
ಮಳೆ ಬಂದ್ರೆ ಎತ್ತಿ ಇಟ್ಟು
ಕಣ್ಣಮುಚ್ಚಿದ್ರೂ ಪಟಾಕಿನೆ ಕನಸಲ್ಲಿ

ಬೇಗ ಎದ್ದು ಸ್ನಾನ ಮಾಡಿ
ಹೂವ ಕುಯ್ದು ಹಾರ ಮಾಡಿ
ದನಗಳಿಗೆಲ್ಲ ಮೈಯ್ಯಿ ತೊಳೆಸಿ
ಹಂಡುಂಡು ಮಾಡಿ ಹಾರ ಹಾಕಿ
ಪೂಜೆ ಆದ್ಮೇಲೆ ತಿನ್ನೋಕ್ ಕೊಟ್ಟು
ಎರಡು ಪಟಾಕಿ ಹೊಡ್ದು ಖುಷಿ ಪಟ್ಟು
ಮುಂಡಿಗೆ ದೇವರಿಗೆ ನೇವೇದ್ಯ ಮಾಡಿ
ಸಂಜೆಗೆ ಕಾಯ್ತಾ ಹೋಳಿಗೆ ತಿಂದು
ಅಕ್ಕಪಕ್ಕದ ಮನೆಯ ತಿಂಡಿ ತಿಂದು
ದೀಪ  ಹೊತ್ತಿಸೋಕೆ ಅಡಿಕೆಸಿಪ್ಪೆ ಆರಿಸಿ
ಕೊಲು ತಂದು ಎಣ್ಣೆಬಟ್ಟೆ ಸುತ್ತಿ
ದೊಂದಿ ಹಿಡ್ಕೊಂಡು ಗದ್ದೆಗೆ ಹೋಗಿ
ದೀಪೋಳಿಗೆ ದೀಪ ದೀಪೋಳಿಗೆ
ಎಲ್ಲರ ಮನೆ ಹೋಳಿಗೆ ಅಂತ ಕೂಗಿ
ಕೋಲು ಹೊತ್ತಿಸಿ ವಾಪಾಸ್ ಬಂದು
ಮನೆ ಸುತ್ತ ದೀಪ ಹೊತ್ತಿಸಿ
ಬಲೀಂದ್ರ ಪೂಜೆ ಮಾಡಿ ಆರತಿ ತಗೊಂಡು
ಪಟಾಕಿ ಬುಟ್ಟಿ ಹೊರಗೆ ತೆಗದು
ಎಲ್ಲಾ ಸೇರಿ ಅಂಗಳದಲ್ಲಿ ನಿಂತು
ಬಾಟಲಿ ಇಟ್ಟು ರಾಕೆಟ್ ಹಾರ್ಸಿ
ನೆಲಚಕ್ರ ಹೊಟ್ಟಿತು, ಬಿದರಿಂಡ್ಲು ಹಾಳು
ಪಟಾಕಿ ಸರಕ್ಕೆ ಬೆಂಕಿ ಕೊಟ್ಟು
ಉಳಿದಿದ್ದ ಪಳದಿದ್ದ ನಕ್ಷತ್ರ ಕಡ್ಡಿ ಹೊತ್ತಿಸಿ
ಕಾಲಿ ಆದ ಬೇಜಾರಲ್ಲಿ ಕೈ ತೊಳ್ಕೊಂಡು
ಊಟಮಾಡಿ ಮಲ್ಕೊಂಡ್ರೆ ಹಬ್ಬ ಮುಗೀತು

--------------(())--------------

ಬೆಳಿಗ್ಗೆ ಎದ್ದು ಅಂಗಳ ಹುಡುಕಿ ಪಟಾಕಿ
ಹೊಟ್ಟದೇ ಉಳಿದಿದೆಯಾ ಅಂತ :P



Wednesday, October 15, 2014

ಎಲ್ಲೋ ಆರಂಭವಾದ ಒಂದು ಸಣ್ಣ ಒರತೆ
ಹನಿ ಹನಿಗೂಡಿ ತೊರೆಯಾಗಿದೆ
ಕಾಡುಮೇಡುಗಳ ಸುತ್ತಿ
ಧುಮ್ಮಿಕ್ಕುತಾ ಹಾಲಿನ ಹೊಳೆಯಂತೆ
ಹರಿದಿದೆ ಸ್ವಚ್ಚಂದವಾಗಿ

ಮೀಯಬೇಕಿದೆ ಈ ತೊರೆಯ ನೀರಲ್ಲಿ
ತೊಳೆದುಕೊಳ್ಳಬೇಕಿದೆ ಆ ಎಲ್ಲ ಪಾಪಗಳ
ಮನೆ, ಹಳ್ಳಿ ಊರು ಕಟ್ಟಲು
ಕಡಿದು ಕೊಂದ ಮರಗಳ ತಾಪವ
ಅಣೆಕಟ್ಟೆ ಕಟ್ಟಿ ಎಲ್ಲಿಂದ ಎಲ್ಲಿಗೋ
ತಿರುವಿದ ನದಿಗಳ ಶಾಪವ

ಬಿಡಲಾರೆವೆ ನಾವು ಪ್ರಕೃತಿಯ
ಸ್ವಚ್ಚಂದವಾಗಿ ಸೃಷ್ಟಿಯ ಆಸೆಯಂತೆ?
ಮಾಡಲೇ ಬೇಕೇ  ಬಲಾತ್ಕಾರ
ಯಾರೂ ಅರಿಯದ ಭವಿಷ್ಯಕ್ಕಾಗಿ?