ಬಂತು ಕಾರ್ತಿಕಮಾಸದ
ಜೊತೆಗೆ ದೀಪಗಳ ಸಾಲುಗಳು
ಇವತ್ತು ಭಟ್ಟರ ಮನೆಯಲ್ಲಿ
ನಾಳೆ ಆಂಜನೇಯ ದೇವಸ್ಥಾನದಲ್ಲಿ
ನಾಡಿದ್ದು ನಾಗರಕಟ್ಟೆಯಲ್ಲಿ
ಪುರ್ಸೊತ್ತೆ ಇಲ್ಲ ನೋಡಿ
ಈ ಕಡೆ ಅಡಿಕೆ ಕುಯಿಲು
ಆ ಕಡೆ ಮಳೆ ಮೋಡದ ಕಾಟ
ಗದ್ದೆ ಬಯಲಲ್ಲಿ ಇಬ್ಬನಿ ತಂಡಿ
ಆದರೂ ಬಿಡೋಕಾಗತ್ತ ದೀಪದ ತಿಂಡಿ
ಕತ್ತಲೆಯಲ್ಲೇ ಹೊರಡುತ್ತೆ ದೀಪದ ಗಿಂಡಿ
ಸ್ವಲ್ಪ ಮೋದಿ ಸ್ವಲ್ಪ ಸಿದ್ದು ವಿಷಯ ಮಾತಾಡಿ
ಇಲ್ಲಿ ನಾಲ್ಕು ದೀಪದ ಸಾಲು ಹೊತ್ತಿಸೋ ಹೊತ್ತಿಗೆ
ಅಲ್ಲಿ ಮಂಗಳಾರತಿ ಜಾಗಂಟೆ ಸದ್ದು
ಕೋಸಂಬರಿ, ಕಡಲೆ ಹುಸಲಿ
ಬಿಸಿಬಿಸಿ ಗಸಗಸೆ ಪಾಯಸ
ಅವಲಕ್ಕಿ, ಎರಡು ತರದ್ದು ಬಾಳೆಹಣ್ಣು
ನಾಲ್ಕು ಉಂಡೆ, ರಸಾಯನ
ಸ್ವಲ್ಪ ಸ್ವಲ್ಪ ತಿನ್ನೋಷ್ಟರಲ್ಲಿ ಹೊಟ್ಟೆ ತುಂಬಿ
ಮನೆ ನೆನಪಾಗಿ ಚಳಿಯಲ್ಲಿ
ದೊಂದಿ ಹಿಡ್ಕೊಂಡು ನಡುಗುತ್ತ
ಮನೆ ಸೇರಿ ಬೆಚ್ಚಗೆ ಹೊದ್ಗೊಂಡು ಮಲ್ಗಿದ್ರೆ
ಆಹಾ ಎಂತಾ ನಿದ್ದೆ ಮಾರ್ರೆ
>
>
>
>
ಅಡಿಕೆ ಕುದ್ದಿದ್ದೆ ಗೊತ್ತಾಗ್ಲಿಲ್ಲ. :P
ಜೊತೆಗೆ ದೀಪಗಳ ಸಾಲುಗಳು
ಇವತ್ತು ಭಟ್ಟರ ಮನೆಯಲ್ಲಿ
ನಾಳೆ ಆಂಜನೇಯ ದೇವಸ್ಥಾನದಲ್ಲಿ
ನಾಡಿದ್ದು ನಾಗರಕಟ್ಟೆಯಲ್ಲಿ
ಪುರ್ಸೊತ್ತೆ ಇಲ್ಲ ನೋಡಿ
ಈ ಕಡೆ ಅಡಿಕೆ ಕುಯಿಲು
ಆ ಕಡೆ ಮಳೆ ಮೋಡದ ಕಾಟ
ಗದ್ದೆ ಬಯಲಲ್ಲಿ ಇಬ್ಬನಿ ತಂಡಿ
ಆದರೂ ಬಿಡೋಕಾಗತ್ತ ದೀಪದ ತಿಂಡಿ
ಕತ್ತಲೆಯಲ್ಲೇ ಹೊರಡುತ್ತೆ ದೀಪದ ಗಿಂಡಿ
ಸ್ವಲ್ಪ ಮೋದಿ ಸ್ವಲ್ಪ ಸಿದ್ದು ವಿಷಯ ಮಾತಾಡಿ
ಇಲ್ಲಿ ನಾಲ್ಕು ದೀಪದ ಸಾಲು ಹೊತ್ತಿಸೋ ಹೊತ್ತಿಗೆ
ಅಲ್ಲಿ ಮಂಗಳಾರತಿ ಜಾಗಂಟೆ ಸದ್ದು
ಕೋಸಂಬರಿ, ಕಡಲೆ ಹುಸಲಿ
ಬಿಸಿಬಿಸಿ ಗಸಗಸೆ ಪಾಯಸ
ಅವಲಕ್ಕಿ, ಎರಡು ತರದ್ದು ಬಾಳೆಹಣ್ಣು
ನಾಲ್ಕು ಉಂಡೆ, ರಸಾಯನ
ಸ್ವಲ್ಪ ಸ್ವಲ್ಪ ತಿನ್ನೋಷ್ಟರಲ್ಲಿ ಹೊಟ್ಟೆ ತುಂಬಿ
ಮನೆ ನೆನಪಾಗಿ ಚಳಿಯಲ್ಲಿ
ದೊಂದಿ ಹಿಡ್ಕೊಂಡು ನಡುಗುತ್ತ
ಮನೆ ಸೇರಿ ಬೆಚ್ಚಗೆ ಹೊದ್ಗೊಂಡು ಮಲ್ಗಿದ್ರೆ
ಆಹಾ ಎಂತಾ ನಿದ್ದೆ ಮಾರ್ರೆ
>
>
>
>
ಅಡಿಕೆ ಕುದ್ದಿದ್ದೆ ಗೊತ್ತಾಗ್ಲಿಲ್ಲ. :P

No comments:
Post a Comment