ಐದು ಜನ ಬುದ್ದಿಜೀವಿಗಳು ಮತ್ತು ಐದು ಜನ ಸಾಮಾನ್ಯ ಜನರು ಒಟ್ಟಿಗೆ ಬೆಂಗಳೂರಿನಿಂದ ಮುಂಬೈಗೆ ಯಾವುದೋ ಸಮಾರಂಬಕ್ಕೆ ಹೊರಡುತ್ತಾರೆ.
ಎಲ್ಲರೂ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಅಲ್ಲಿ ಒಟ್ಟಿಗೆ ಸೇರ್ತಾರೆ.
ಎರಡೂ ಪಂಗಡಗಳೂ ತಾವು ಹೆಚ್ಚು ಬುದ್ದಿವಂತರು ಅನ್ನೋದನ್ನ ತೋರಿಸ್ಕೋಬೇಕು ಅಂತ ಮೊದಲೇ ನಿರ್ಧರಿಸಿರುತ್ತಾರೆ.
ಹಂತ - ೧ (ಬೆಂಗಳೂರ್ - ಬೆಳಗಾವಿ)
ಅವರಿಗೆ ಡೈರೆಕ್ಟ್ ಮುಂಬೈ ರೈಲ್ ನಲ್ಲಿ ಟಿಕೆಟ್ ಸಿಗದ ಕಾರಣ ಬೆಳಗಾವಿವರೆಗೆ ಹೋಗಿ ನಂತರ ಮುಂದಿನ ರೈಲ್ ನಲ್ಲಿ ಮುಂಬೈಗೆ ಹೋಗೋದು ಅಂತ ತೀರ್ಮಾನಿಸುತ್ತಾರೆ.
ಸಾಮಾನ್ಯ ಜನರು ಒಂದೇ ಟಿಕೆಟ್ ತಗೋತಾರೆ, ಬುದ್ದಿಜೀವಿಗಳು ಐದು ಟಿಕೆಟ್ ತಗೋತಾರೆ, ಹಾಗೆ ಟಿ ಸಿ ಬರುವುದನ್ನೇ ಕಾಯ್ತಾ ಇರ್ತಾರೆ ಬುದ್ದಿ ಜೀವಿಗಳು.
ಟಿ ಸಿ ಬರುವುದನ್ನು ದೂರದಿಂದ ನೋಡಿದ ಸಾಮಾನ್ಯ ಜನರು ಸೀದಾ ಒಟ್ಟಿಗೆ ಒಂದೇ ಟಾಯ್ಲೆಟ್ ಒಳಗೆ ಹೋಗಿ ಸೇರಿಕೊಳ್ತಾರೆ. ಟಿ ಸಿ ಹೋಗಿ ಟಾಯ್ಲೆಟ್ ಬಾಗಿಲು ಬಡಿಯುತ್ತಾನೆ. ಒಂದು ಕೈ ಟಿಕೆಟ್ ಜೊತೆಗೆ ಹೊರಗೆ ಬರತ್ತೆ ಟಿಸಿ ಚೆಕ್ ಮಾಡಿ ಹೊರಡ್ತಾನೆ.
ಹಂತ - ೨ (ಬೆಳಗಾವಿ - ಮುಂಬೈ)
ಬುದ್ದಿಜೀವಿಗಳು ಈ ಭಾರಿ ನಾವು ಹೆಚ್ಚು ಬುದ್ದಿವಂತರು ಅಂತ ತೋರಿಸಿ ಕೊಳ್ಳಲೇಬೇಕು ಅಂತ ನಿರ್ಧರಿಸ್ತಾರೆ.
ಈಗ ಬುದ್ದಿಜೀವಿಗಳು ಒಂದು ಟಿಕೆಟ್ ತಗೋತಾರೆ. ಸಾಮಾನ್ಯ ಜನರು ಒಂದೂ ಟಿಕೆಟ್ ತಗೊಳೋದೇ ಇಲ್ಲ.
ಟಿಸಿ ಬರ್ತಾ ಇದಾನೆ...
ಎಲ್ಲ ಬುದ್ದಿಜೀವಿಗಳೂ ಒಂದು ಟಾಯ್ಲೆಟ್ ಸೇರ್ಕೊತಾರೆ. ಎಲ್ಲ ಸಾಮಾನ್ಯ ಜನರು ಎದುರಿನ ಟಾಯ್ಲೆಟ್ ಸೇರ್ಕೊತಾರೆ.
ಒಬ್ಬ ಸಾಮಾನ್ಯ ಜನ ಟಾಯ್ಲೆಟ್ ಇಂದ ಹೊರಗೆ ಬಂದು ಬುದ್ದಿಜೀವಿಗಳ ಟಾಯ್ಲೆಟ್ ಬಾಗಿಲು ಬಡೀತಾನೆ. ಒಂದು ಕೈ ಟಿಕೆಟ್ ಜೊತೆ ಹೊರಗೆ ಬರತ್ತೆ. ಸಾಮಾನ್ಯ ಜನ ಟಿಕೆಟ್ ತಗೊಂಡು ಟಾಯ್ಲೆಟ್ ಒಳಗೆ ಬೇಗ ಸೇರ್ಕೊತಾನೆ. ಟಿ ಸಿ ಹೋಗಿ ಟಾಯ್ಲೆಟ್ ಬಾಗಿಲು ಬಡಿಯುತ್ತಾನೆ. ಒಂದು ಕೈ ಟಿಕೆಟ್ ಜೊತೆಗೆ ಹೊರಗೆ ಬರತ್ತೆ ಟಿಸಿ ಚೆಕ್ ಮಾಡ್ತಾನೆ. ನಂತರ ಬುದ್ದಿಜೀವಿಗಳ ಟಾಯ್ಲೆಟ್ ಡೋರ್ ಬಡೀತಾನೆ ಟಿಕೆಟ್ ಇಲ್ಲ ಅಂತ ಡೋರ್ ಓಪನ್ ಮಾಡಿಸ್ತಾನೆ. ಅಷ್ಟೂ ಬುದ್ದಿಜೇವಿಗಳನ್ನೂ ಹೊರಗೆಳೆದು ಹತ್ತು ಪಟ್ಟು ಫೈನ್ ಹಾಕುತ್ತಾನೆ.
ಹಂತ - ೩ (ಮುಂಬೈ)
ಈಗ ಎಲ್ಲರೂ ಮುಂಬೈ ಹೇಗೋ ಕಷ್ಟಪಟ್ಟು ಸೇರಿದ್ದಾರೆ. ಬುದ್ದಿಜೀವಿಗಳಿಗೆ ಈಗ ಇದು ಕೊನೇ ಅವಕಾಶ ಏನಾದ್ರೂ ಮಾಡಿ ಈ ಸರಿ ಸಾಮಾನ್ಯ ಜನಗಳನ್ನ ಸೋಲಿಸಿಯೇ ಸಿದ್ಧ ಅಂತ ನಿರ್ಧರಿಸುತ್ತಾರೆ. ಎಲ್ಲರೂ ಮುಂಬೈ ಲೋಕಲ್ ಟ್ರೈನ್ ಟಿಕೆಟ್ ಗೋಸ್ಕರ ಕ್ಯೂ ನಿಲ್ತಾರೆ.
ಬುದ್ದಿಜೀವಿಗಳು ಒಂದೇ ಟಿಕೆಟ್ ಟ್ರಿಕ್ ಮಾಡೋಣ ಅಂತ ನಿರ್ಧರಿಸಿ ಒಂದೇ ಟಿಕೆಟ್ ತಗೋತಾರೆ. ಸಾಮಾನ್ಯ ಜನರು ಐದು ಟಿಕೆಟ್ ತಗೋತಾರೆ.
ಟಿಸಿ ಬರ್ತಾನೆ, ಸಾಮಾನ್ಯ ಜನರು ಟಿಕೆಟ್ ತೋರಿಸ್ತಾರೆ. ಬುದ್ದಿಜೀವಿಗಳು ಟಾಯ್ಲೆಟ್ ಗಾಗಿ ಹುಡುಕ್ತಾನೆ ಇದಾರೆ "ಲೋಕಲ್ ಟ್ರೈನ್"ನಲ್ಲಿ !!!
ಸಾರಾಂಶ: ಬುದ್ದಿಜೀವಿಗಳಿಗೂ ಬುದ್ದಿವಂತಿಕೆಗೂ ವ್ಯತ್ಯಾಸವಿದೆ.

No comments:
Post a Comment