Wednesday, July 9, 2014

ನಾನೆಷ್ಟು ಸಣ್ಣವನು

ಆಗಮನದಿಂದ ಜಗಕೆ ಬೆಳಕ ತರುವ
ಕತ್ತಲಲಿ ಶಶಿಯನೇ ಬೆಳಗಿಸುವ
ಸಕಲ ಜೀವಗಳಿಗೆ ಶಕ್ತಿಯ ನೀಡುವ
ಆ ಸೂರ್ಯನ ಮುಂದೆ ನಾನೆಷ್ಟು ಸಣ್ಣವನು

ಮೀನು ಮೊಸಳೆಗಳಿಗೆ ಅಶ್ರಯವನೀಯುವ
ಗಿಡ ಮರಗಳಿಗೆ ಜೀವ ತುಂಬುವ
ಪ್ರಾಣಿ ಸಂಕುಲಗಳ ದಾಹ ನೀಗುವ
ಆ ನದಿಯ ಮುಂದೆ ನಾನೆಷ್ಟು ಸಣ್ಣವನು

ನೂರಾರು ಹಕ್ಕಿಗಳಿಗೆ ಗೂಡಾಗುವ
ಸಾವಿರಾರು ಜನರಿಗೆ ನೆರಳಾಗುವ
ಉದುರಿದಾ ಎಲೆ ಗೊಬ್ಬರವಾಗುವ
ಆ ಮರದ ಮುಂದೆ ನಾನೆಷ್ಟು ಸಣ್ಣವನು 

No comments:

Post a Comment